ನಾ ಗೀಚಿದ ಕೆಲವು ಸಾಲುಗಳು. . .

11 06 2010

ಇವುಗಳು ಕವಿತೆಗಳಲ್ಲ. ಬರೀ ಕೆಲವು ಸಾಲುಗಳು. ಕಾಗದದ ಮೇಲಿಳಿಯದೇ ಹೋಗಿದ್ದರೆ ಕೆನ್ನೆಯ ಮೇಲೆ ಹರಿದು ಮಾಯವಾಗಿರುತ್ತಿದ್ದ ಹನಿಗಳು. . .

***************

ಎದೆಯೊಳಗೆ ಎಂದೋ ಹುಟ್ಟಿದ್ದ ಕನಸೊಂದು

ಇನ್ನೂ ಜೀವಂತವಾಗಿ ಮಲಗಿದೆ ಶವದ ಪೆಟ್ಟಿಗೆಯೊಳಗೆ.

****

ಗೆಳೆಯಾ, ನೀ ಬಹಳಾ ದೊಡ್ಡವನಾಗಿ ಬಿಟ್ಟಿ

ನಾನಿನ್ನೂ ಹಾಗೆಯೇ ಇದ್ದೇನೆ ನೋಡು

ಕಾಗೆ ಗುಬ್ಬಿ ಕತೆ ಹೇಳುತ್ತಾ,

ಉಯ್ಯಾಲೆ ಆಡುತ್ತಾ,

ಗಾಳಿಪಟ ಹಾರಿಸುತ್ತಾ.

**********

ಮತ್ತೊಮ್ಮೆ ಹುಟ್ಟಿದ ಸೂರ್ಯ

ಮತ್ತೊಮ್ಮೆ ಹುಟ್ಟಿದೆ ನಾನು

ಹೊಸ ಮುಖವಾಡ ತೊಟ್ಟು.

*****************


Actions

Information

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s




Follow

Get every new post delivered to your Inbox.